Ticker

6/recent/ticker-posts

SSSBN Bank Recruitment 2023 - Apply Online For 18 Peon Posts

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಲೇಖನದಲ್ಲಿ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹಾಗೂ ಚಾಲಕ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ತಿಳಿಯೋಣ.

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ ಚಾಲಕ, ಡಾಟಾ ಎಂಟ್ರಿ ಆಪರೇಟರ್, ಶಾಖ ವ್ಯವಸ್ಥಾಪಕ, ಅಕೌಂಟೆಂಟ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಇಲಾಖೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ, ಅರ್ಜಿ ಸಲ್ಲಿಸುವ ವಿಧಾನ, ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ.


SSSBN Bank VACANCY NOTIFICATION 2023


ನೇಮಕಾತಿ ಇಲಾಖೆ ಹೆಸರು ‌: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ

ಒಟ್ಟು ಹುದ್ದೆಗಳ ಸಂಖ್ಯೆ : 18 ಹುದ್ದೆಗಳು

ಉದ್ಯೋಗದ ಸ್ಥಳ : ಕರ್ನಾಟಕ

ಹುದ್ದೆಗಳ ಹೆಸರು : ಡಾಟಾ ಎಂಟ್ರಿ ಆಪರೇಟರ್ /  ಅಟೆಂಡೆಂಟ್ ಹಾಗೂ ಅಕೌಂಟೆಂಟ್

ವೇತನ ಶ್ರೇಣಿ : 21,400-83,900/-


SSSBN Bank Vacancy Details 2023


ಕ್ರ.ಸಂಖ್ಯೆಹುದ್ದೆಗಳ ಹೆಸರುಒಟ್ಟು ಹುದ್ದೆಗಳ ಸಂಖ್ಯೆಸಂಬಳ
1ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ343100-83900
2ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಎ137900-70850
3ಸಹಾಯಕ ವ್ಯವಸ್ಥಾಪಕರು / ಸಹಾಯಕ ಲೆಕ್ಕಾಧಿಕಾರಿಗಳು / ಕ್ಷೇತ್ರ ಅಧಿಕಾರಿಗಳು / ವಸುಲಾಧಿಕಾರಿಗಳು/ ಡಿ.ಬಿ.ಎ533450-62600
4ಹಿರಿಯ ಸಹಾಯಕರು / ಹಿರಿಯ ದತ್ತಾಂಶ ನಮ್ಮದು ಆಯೋಜಕರು -230350-58250
5ಸೇವಕರು/ಜವಾನರು ಅಥವಾ ಭದ್ರತಾ ರಕ್ಷಕರು ಅಥವಾ ಚಾಲಕರು630350-58250
6ಕಿರಿಯ ಸಹಾಯಕರು / ಗುಮಾಸ್ತ / ಬೆರಳಚ್ಚುಗಾರ / ದತ್ತಾಂಶ ಆಯೋಜಕರು121400-42000


SSSBN Bank recruitment 2023 eligibility details


ಶೈಕ್ಷಣಿಕ ವಿಧ್ಯಾರ್ಥಿ ವಿವರಣೆ : 

1. ಶಾಖಾ ವ್ಯವಸ್ಥಾಪಕರು/ ಉಪ ವ್ಯವಸ್ಥಾಪಕರು/ ಲೆಕ್ಕಾಧಿಕಾರಿ - Banking/ Accountancy/ Economics/ Maths/ Statistics/ Business, Administration ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ 3 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.


2. ಕಂಪ್ಯೂಟರ್ ಪ್ರೋಗ್ರಾಮರ್ ಹಾಗೂ ಡಿ.ಬಿ.ಎ - BCA B.Tech (Computers) ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ 3 ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು


3. ಸಹಾಯಕ ವ್ಯವಸ್ಥಾಪಕರು / ಸಹಾಯಕ ಲೆಕ್ಕಾಧಿಕಾರಿಗಳು / ಕ್ಷೇತ್ರ ಅಧಿಕಾರಿಗಳು / ವಸುಲಾಧಿಕಾರಿಗಳು/ ಡಿ.ಬಿ.ಎ - Banking/Accountancy/ Economics/ Maths/ Statistics/ Business Administration/ BCA/ B.Tech (Computers) ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಕನಿಷ್ಠ ವರ್ಷ ಬ್ಯಾಂಕಿನ ಅಧಿಕಾರಿ ಹುದ್ದೆಯಲ್ಲಿ 3 ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.


4. ಹಿರಿಯ ಸಹಾಯಕರು / ಹಿರಿಯ ದತ್ತಾಂಶ ನಮ್ಮದು ಆಯೋಜಕರು - Banking/ Accountancy/ Economics/ Maths/ Statistics/ Business Administration ಯಾವುದಾದರು ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ದ್ವಿತೀಯ ದರ್ಜೆಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.


5. ಸೇವಕರು/ಜವಾನರು ಅಥವಾ ಭದ್ರತಾ ರಕ್ಷಕರು ಅಥವಾ ಚಾಲಕರು - ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಚಾಲನಾ ಪರವಾನಗಿಯೊಂದಿಗೆ ಅನುಭವ ಹೊಂದಿರಬೇಕು.


6. ಕಿರಿಯ ಸಹಾಯಕರು / ಗುಮಾಸ್ತ / ಬೆರಳಚ್ಚುಗಾರ / ದತ್ತಾಂಶ ಆಯೋಜಕರು - ಯಾವುದಾದರೂ ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಪಡೆದಿರಬೇಕು.


ವಿಶೇಷ ಗಮನಕ್ಕಾಗಿ  : ಎಲ್ಲಾ ಹುದ್ದೆಗಳಿಗೂ ಕನ್ನಡ ಭಾಷೆಯನ್ನು ಓದಲು ಬರೆಯಲು ಅರ್ಥೈಸಿಕೊಳ್ಳಲು ಮತ್ತು ಮಾತನಾಡುವ ಸಾಮರ್ಥ್ಯ ಪರಿಜ್ಞಾನವನ್ನು ಹೊಂದಿರಬೇಕು.


ವಯೋಮಿತಿ ವಿವರಣೆ :

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ಉಯೋಮಿತಿಯಲ್ಲಿ ಸಡಿಲಿಕೆ ಸಹ ನೀಡಲಾಗಿದೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.


ವಯೋಮಿತಿ ಸಡಿಲಿಕೆ ವಿವರಣೆ :

ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಅರ್ಜಿ ಶುಲ್ಕ : 

1. ಕ್ರಮ ಸಂಖ್ಯೆ 1 ರಿಂದ 4 ರ ವರೆಗಿನ ಹುದ್ದೆಗಳಿಗೆ = ರೂ.354/- (ಅರ್ಜಿ ಶುಲ್ಕ ರೂ.300+ಜಿ.ಎಸ್.ಟಿ ರೂ.54)

2. ಕ್ರಮ ಸಂಖ್ಯೆ 5 ರ ಹುದ್ದೆಗೆ = ರೂ.177/- (ಅರ್ಜಿಶುಲ್ಕ ರೂ.150+ಜಿ.ಎಸ್.ಟಿ ರೂ.27)


How to apply for SSSBN Bank recruitment 2023


ಅರ್ಜಿ ಸಲ್ಲಿಸುವ ವಿಧಾನ : 

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ವೆಬ್‌ ಸೈಟ್ (www.sreenidhibank.com) ನಿಂದ ಡೌನ್‌ಲೋಡ್‌ ಮಾಡಿಕೊಂಡು, ಲಿಖಿತ/ ಮುದಿತ ರೂಪದಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅರ್ಜಿ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್‌ನ್ನು ಲಗತ್ತಿಸಿ 'ವ್ಯವಸ್ಥಾಪಕ ನಿರ್ದೇಶಕರು, ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ, ಆಡಳಿತ ಕಛೇರಿ, ನಂ.113, ಆರ್.ಎ.ರಸ್ತೆ, ವಿ.ವಿ.ಪುರಂ, ಬೆಂಗಳೂರು-560004” ಈ ವಿಳಾಸಕ್ಕೆ ಅಂಚೆ/ಕೋರಿಯರ್ ಅಥವಾ ಖುದ್ದಾಗಿ ತಲುಪಿಸತಕ್ಕದ್ದು. ಅರ್ಜಿ, ಡಿ.ಡಿ ಮತ್ತು ಇತರ ದಾಖಲಾತಿಗಳನ್ನೊಳಗೊಂಡ ಸೀಲ್‌ ಮಾಡಿದ ಲಕೋಟೆಯ ಮೇಲೆ “ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ-2023” ಎಂದು ನಮೂದಿಸಬೇಕು.


ಅರ್ಜಿ ಸಲ್ಲಿಕೆಗೆ ಬೇಕಾಗುವ ಸೂಕ್ತ ದಾಖಲಾತಿಗಳು : 

1. ಸೂಕ್ತವಾಗಿ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿದ ಹಾಗೂ ಅಭ್ಯರ್ಥಿಯ ಸಹಿಯನ್ನು ಹೊಂದಿರುವ ಅರ್ಜಿ,

2.ಹುದ್ದೆಗೆ ನಿಗದಿಪಡಿಸಿದ ಅರ್ಜಿ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್,

3.ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನು ರುಜುವಾತುಪಡಿಸುವ ದಾಖಲಾತಿಗಳು ಸ್ವಯಂ ದೃಢೀಕೃತ ಪ್ರತಿಗಳು, (ಎಲ್ಲಾ ವರ್ಷಗಳ ಸೆಮಿಸ್ಟರ್‌ಗಳ ಅಂಕಪಟ್ಟಿಗಳು)

4.ಈಗಾಗಲೇ ಸೇವೆಯಲ್ಲಿದ್ದಲ್ಲಿ, ತಾವು ಸೇವೆ ಸಲ್ಲಿಸುತ್ತಿರುವ ಪ್ರಾಧಿಕಾರ ಸಂಸ್ಥೆಯಿಂದ ಅರ್ಜಿ ಸಲ್ಲಿಕೆಗೆ ಅನುಮತಿ ಪತ್ರ, (ಮಾದರಿ ನೀಡಲಾಗಿದೆ)

5.ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಕುರಿತು ಸ್ವಯಂ ದೃಢೀಕರಿಸಿದ ದಾಖಲಾತಿ


ಆಯ್ಕೆ ವಿಧಾನ : ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ


ಅಧಿಸೂಚನೆ ಪಡೆಯುವ ವಿಧಾನಗಳು : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ಹಾಗೂ ಅಧಿಸೂಚನೆ ಪಡೆಯಲು ಗೂಗಲ್ ನಲ್ಲಿ www Karnataka news hunter.com ಭೇಟಿ ನೀಡಿ.



SSSBN recruitment 2023 important dates


ಪ್ರಮುಖ ದಿನಾಂಕಗಳು : 

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 02 ಜುಲೈ 2023

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 17 ಜುಲೈ 2023


ಮುಖ್ಯ ಪದಗಳು :

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ನೇಮಕಾತಿ 2023 ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ದಯವಿಟ್ಟು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ ನಿಮ್ಮ ಸ್ನೇಹಿತ ಹಾಗೂ ಸ್ನೇಹಿತರಿಗೆ ಈ ಮಾಹಿತಿಯನ್ನು ಕಳಿಸಿರಿ.


Prema jobs info ಅಂತರ್ಜಲದ ಬಗ್ಗೆ ಸಣ್ಣ ಟಿಪ್ಪಣಿ

1. ಈ ಅಂತರ್ಜಾಲ ಉದ್ಯೋಗ ಮಾಹಿತಿ ಹುಡುಕುವ ಅಭ್ಯರ್ಥಿಗಳಿಗೆ ಸುಲಭವಾಗಿ ಉದ್ಯೋಗ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.

2. ಈ ಅಂತರ್ಜಾಲ ಕರ್ನಾಟಕದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಉಪಯೋಗವಾಗಲಿದೆ ಇದರಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಹೊರಡಿಸುವ ಉದ್ಯೋಗದ ಮಾಹಿತಿಯನ್ನು ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡುತ್ತದೆ.

3. ಈ ಅಂತರ್ಜಾಲವೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿ ಸ್ಥಾಪಿಸಲಾಗಿದೆ ಇಲ್ಲಿ ಯಾವುದೇ ರೀತಿಯ ಮೋಸ ಅಥವಾ ಸುಳ್ಳು ಮಾಹಿತಿಯನ್ನು ನೀಡಲಾಗುವುದಿಲ್ಲ

4. ಕರ್ನಾಟಕದಲ್ಲಿ ಹಲವಾರು ರೀತಿಯ ಅಂತರ್ಜಾಲಗಳು ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಆದರೆ ಈ ಅಂತರಜಾಲ ನಿಮಗೆ ಉಪಯುಕ್ತವಾದ ಹಾಗೂ ಸ್ಪಷ್ಟವಾದ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತದೆ.

5. ಕೇವಲ ಉದ್ಯೋಗ ಮಾಹಿತಿ ಅಲ್ಲದೆ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ.

6. ಈ ಅಂತರ್ಜಾಲದ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಬಹುದು ಅಥವಾ ನಮ್ಮನ್ನು ಫೇಸ್ಬುಕ್ ಯೌಟ್ಯೂಬ್ ಮತ್ತು ವಾಟ್ಸಪ್ ಗ್ರೂಪ್ ಗಳ ಮೂಲಕ ಸಹ ನಮ್ಮನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು