ನಮಸ್ಕಾರ ಪ್ರಿಯ ಸ್ನೇಹಿತರೆ, ಇವತ್ತಿನ ಈ ಒಂದು ಲೇಖನದಲ್ಲಿ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ, ತಾಲೂಕು ಆಡಳಿತ ಸಹಾಯಕ ಹಾಗೂ ತಾಲೂಕು ಐಇಸಿ ಸಂಯೋಜಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯೋಣ.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇಲಾಖೆಯು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ನೀಡಲಾಗಿದೆ ರಾಜ್ಯ ಸರಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಬಹುದು. ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ, ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ ಹಾಗೂ ಉದ್ಯೋಗದ ಸ್ಥಳ ಇನ್ನಿತರ ಮಾಹಿತಿಯ ಬಗ್ಗೆ ಈ ಕೆಳಗಿನಂತೆ ವಿವರಣೆಯನ್ನು ನೀಡಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಯ ಅಧಿಸೂಚನೆಯ ವಿವರಣೆ 2023
ಇಲಾಖೆಯ ಹೆಸರು : ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ( ಉತ್ತರ ಕನ್ನಡ ಜಿಲ್ಲಾ ಪಂಚಾಯತ್ )
ಹುದ್ದೆಗಳ ಹೆಸರು : ತಾಂತ್ರಿಕ ಸಹಾಯಕ, ತಾಲೂಕು ಆಡಳಿತ ಸಹಾಯಕ
ಒಟ್ಟು ಹುದ್ದೆಗಳ ಸಂಖ್ಯೆ : ಇಲಾಖೆಯಲ್ಲಿ ಒಟ್ಟು 14 ಹುದ್ದೆಗಳು ಖಾಲಿ ಇವೆ
ವೇತನ ಶ್ರೇಣಿ : ರೂಪಾಯಿ 22 ಸಾವಿರದಿಂದ 28,000 ಪ್ರತಿ ತಿಂಗಳಿಗೆ
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಯ ವಿವರಣೆ
ಹುದ್ದೆಗಳ ಹೆಸರು :
1. ತಾಂತ್ರಿಕ ಸಹಾಯಕ ಒಟ್ಟು 12 ಹುದ್ದೆಗಳು
2. ತಾಲೂಕು ಆಡಳಿತ ಸಹಾಯಕ 1 ಹುದ್ದೆ
3. ತಾಲೂಕು ಐಇಸಿ ಸಂಯೋಜಕರು 1 ಹುದ್ದೆ
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2023 ಶೈಕ್ಷಣಿಕ ಅರ್ಹತೆ ವಿವರಗಳು
ತಾಂತ್ರಿಕ ಸಹಾಯಕ - ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ BE, B.SC, M.SC ಪದವಿಯನ್ನು ಪಡೆದಿರಬೇಕು.
ತಾಲೂಕು ಆಡಳಿತ ಸಹಾಯಕ - ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಕಾಂ ಪದವಿಯನ್ನು ಪೂರ್ಣಗೊಳಿಸಬೇಕು.
ತಾಲೂಕು ಐಇಸಿ ಸಂಯೋಜಕರು-ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಮೂಹ ಸಂವಹನದಲ್ಲಿ ನಾಟಕೋತರ ಪದವಿಯನ್ನು ಪಡೆದಿರಬೇಕು.
( ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2023 ಶೈಕ್ಷಣಿಕ ಅರ್ಹತೆ ವಿವರಣೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಅಧಿಸೂಚನೆ ಲಿಂಕನ್ನು ಗಮನಿಸಿ )
ಹುದ್ದೆಗಳ ಇತರೆ ಮಾಹಿತಿ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 2ರಿಂದ 3 ವರ್ಷಗಳ ಅನುಭವವನ್ನು ಪಡೆದಿರಬೇಕು.
ವಯೋಮಿತಿ ವಿವರಣೆ :
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಸಹ ಕನಿಷ್ಠ 25 ವರ್ಷ ಗರಿಷ್ಠ 40 ವರ್ಷಗಳನ್ನು ಪೂರೈಸಬೇಕು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆಯನ್ನ ಗಮನಿಸಬಹುದು.
ವಯೋಮಿತಿ ಸಡಿಲಿಕೆ ವಿವರಣೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕ್ಕೆ ಸಹ ಇರುತ್ತದೆ.
ಅರ್ಜಿ ಶುಲ್ಕ :
ಇಲಾಖೆಯ ನಿಯಮಗಳು ಅನ್ವಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಕರ್ನಾಟಕದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಇಲಾಖೆಯ ನಿಯಮಗಳ ಅನುಸಾರ ಮೆರಿಟ್ ಪಟ್ಟಿ, ಕಂಪ್ಯೂಟರ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ :
ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ 28,000 ವೇತನವನ್ನು ನಿಗದಿಪಡಿಸಲಾಗಿದೆ. ತಾಲೂಕು ಆಡಳಿತ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22 ಸಾವಿರ ನಿಗದಿಪಡಿಸಲಾಗಿದೆ. ತಾಲೂಕು ಐ ಎ ಸಿ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸಿದ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ 28,000 ವೇತನವನ್ನು ನಿಗದಿಪಡಿಸಲಾಗಿದೆ.
ಉತ್ತರಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2023 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ವಿಧಾನ :
1. ಅಭ್ಯರ್ಥಿಗಳು ಮೊದಲನೇದಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಸೂಚನೆ 2023 ಸಂಪೂರ್ಣವಾಗಿ ಓದಿಕೊಂಡು ಮತ್ತು ಇಲಾಖೆ ನಿಗದಿಪಡಿಸಿರುವ ಅರ್ಹತ ಮಾನದಂಡಗಳನ್ನು ಪೂರೈಸಿದ್ದರೆ ಎಲ್ಲಾ ಮಾಹಿತಿಗಳನ್ನು ಖಚಿತ ಪಡಿಸಿಕೊಂಡು ತದನಂತರ ನಾವು ನೀಡುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
2. ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಭರ್ತಿ ಮಾಡುವಾಗ ಸಂಹವನ ಉದ್ದೇಶಕ್ಕಾಗಿ ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಮುಂತಾದವುಗಳನ್ನು ಒದಗಿಸಿ. ಅಲ್ಲಿ ಕೇಳುವ ನಿಮ್ಮ ಶಾಲಾ ಪುರಾವೆಗಳಾದ ಅಂಕಪಟ್ಟಿ, ಜಾತಿ ಆದಾಯ, ವೋಟರ್ ಐಡಿ ಕಾರ್ಡ್ ಮುಂತಾದ ದಾಖಲೆಗಳನ್ನು ಒದಗಿಸಬೇಕು.
3. ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ತಾಂತ್ರಿಕ ಸಹಾಯಕ, ತಾಲೂಕು ಆಡಳಿತ ಸಹಾಯಕ, ಹೀಗೆ ನಿಮಗೆ ಬೇಕಾದ ಹುದ್ದೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
4. ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ಇರುವ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ ಒಮ್ಮೆ ಪರಿಶೀಲಿಸಿ ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರ ಪ್ರಮಾಣ ಪತ್ರಗಳು ಮುಂತಾದ ದಾಖಲೆಗಳನ್ನು. ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
5. ನಿಮ್ಮ ವರ್ಗದ ಅರ್ಜಿ ಮೊತ್ತವನ್ನು ಪಾವತಿ ಮಾಡಿ ಅದರ ಜೆರಾಕ್ಸ್ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
6. ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ನೀವು ಸಂಪೂರ್ಣವಾಗಿ ಅರ್ಜಿಯನ್ನು ಸಲ್ಲಿಸುತ್ತೀರಿ.
ಪ್ರಮುಖ ದಿನಾಂಕಗಳು :
ಅರ್ಜಿಯನ್ನ ಸಲ್ಲಿಸಲು ಆರಂಭದ ದಿನಾಂಕ 17 ಜೂನ್ 2023
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 26 ಜೂನ್ 2023
ಮುಖ್ಯ ಪದಗಳು :
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ 2023 ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ದಯವಿಟ್ಟು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ ನಿಮ್ಮ ಸ್ನೇಹಿತ ಹಾಗೂ ಸ್ನೇಹಿತರಿಗೆ ಈ ಮಾಹಿತಿಯನ್ನು ಕಳಿಸಿರಿ.
Prema jobs info ಅಂತರ್ಜಲದ ಬಗ್ಗೆ ಸಣ್ಣ ಟಿಪ್ಪಣಿ
1. ಈ ಅಂತರ್ಜಾಲ ಉದ್ಯೋಗ ಮಾಹಿತಿ ಹುಡುಕುವ ಅಭ್ಯರ್ಥಿಗಳಿಗೆ ಸುಲಭವಾಗಿ ಉದ್ಯೋಗ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.
2. ಈ ಅಂತರ್ಜಾಲ ಕರ್ನಾಟಕದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಉಪಯೋಗವಾಗಲಿದೆ ಇದರಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಹೊರಡಿಸುವ ಉದ್ಯೋಗದ ಮಾಹಿತಿಯನ್ನು ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡುತ್ತದೆ.
3. ಈ ಅಂತರ್ಜಾಲವೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿ ಸ್ಥಾಪಿಸಲಾಗಿದೆ ಇಲ್ಲಿ ಯಾವುದೇ ರೀತಿಯ ಮೋಸ ಅಥವಾ ಸುಳ್ಳು ಮಾಹಿತಿಯನ್ನು ನೀಡಲಾಗುವುದಿಲ್ಲ
4. ಕರ್ನಾಟಕದಲ್ಲಿ ಹಲವಾರು ರೀತಿಯ ಅಂತರ್ಜಾಲಗಳು ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಆದರೆ ಈ ಅಂತರಜಾಲ ನಿಮಗೆ ಉಪಯುಕ್ತವಾದ ಹಾಗೂ ಸ್ಪಷ್ಟವಾದ ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತದೆ.
5. ಕೇವಲ ಉದ್ಯೋಗ ಮಾಹಿತಿ ಅಲ್ಲದೆ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ.
6. ಈ ಅಂತರ್ಜಾಲದ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಬಹುದು ಅಥವಾ ನಮ್ಮನ್ನು ಫೇಸ್ಬುಕ್ ಯೌಟ್ಯೂಬ್ ಮತ್ತು ವಾಟ್ಸಪ್ ಗ್ರೂಪ್ ಗಳ ಮೂಲಕ ಸಹ ನಮ್ಮನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು
0 ಕಾಮೆಂಟ್‌ಗಳು